ಬಾಲಿವುಡ್ ಚಿತ್ರಕ್ಕೆ ಕೊಟ್ಟ ಮರ್ಯಾದೆ ಕನ್ನಡ ಚಿತ್ರಕ್ಕೆ ದೀಪಿಕಾ ಪಡುಕೋಣೆ ಕೊಡಲಿಲ್ಲ | Filmibeat Kannada

2017-10-27 759

Deepika Padukone neglects Kannada Cinemas. Recently in her interview, ''Before 'Om shanti Om' I never entered any film set'' says Deepika Padukone.


ನಟಿ ದೀಪಿಕಾ ಪಡುಕೋಣೆ ನೋಡಿದಾಗ ಕನ್ನಡಿಗರು 'ಈಕೆ ನಮ್ಮ ಕನ್ನಡದ ಹುಡುಗಿ... ಕರಾವಳಿಯ ಕುವರಿ.... ಬೆಂಗಳೂರಿನ ಬೆಡಗಿ' ಅಂತ ಹೇಳಿ ಹೆಮ್ಮೆ ಪಡುತ್ತಾರೆ. ಆಕೆಯ ಸಿನಿಮಾವನ್ನು ತಪ್ಪಿಸದೇ ನೋಡುತ್ತಾರೆ. ಆದರೆ ದೀಪಿಕಾ ಮಾತ್ರ ತಾವು ಕನ್ನಡ ಚಿತ್ರದಲ್ಲಿ ನಟಿಸಿರುವುದನ್ನೇ ಮರೆತು ಬಿಟ್ಟಿರುವ ಹಾಗೆ ಕಾಣುತ್ತಿದೆ. ನಟಿ ದೀಪಿಕಾ ಪಡುಕೋಣೆ ಇತ್ತೀಚಿಗಷ್ಟೆ ಒಂದು ಸಂದರ್ಶನ ನೀಡಿದ್ದರು. ಅದರಲ್ಲಿ ತಮ್ಮ ಮೊದಲ ಬಾಲಿವುಡ್ ಚಿತ್ರ 'ಓಂ ಶಾಂತಿ ಓಂ' ಬಗ್ಗೆ ಮಾತನಾಡಿದ್ದಾರೆ. ಅವರ ಆ ಮಾತುಗಳನ್ನು ಒಮ್ಮೆ ಕೇಳಿದರೆ ದೀಪಿಕಾ ಕನ್ನಡ ಚಿತ್ರಕ್ಕೆ ನೀಡಿದ ಗೌರವ ಇದೇನಾ.? ಎನ್ನುವಂತೆ ಮಾಡುತ್ತದೆ.ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ತಮ್ಮ 'ಓಂ ಶಾಂತಿ ಓಂ' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಮಾತುಗಳಲ್ಲಿ ಕನ್ನಡದ ಚಿತ್ರವನ್ನು ನಿರ್ಲಕ್ಷ್ಯ ಮಾಡಿದ್ದು ಎದ್ದು ಕಾಣುತ್ತಿದೆ.

Videos similaires